Search This Blog

Thursday, March 24, 2011

60+ Earth Hour 2011’ (ಒಂದು ಘಂಟೆವರೆಗೆ ಪ್ರಪಂಚದ ಶಕ್ತಿ ಬಳಕೆ ನಿಷೇದ)

ಇದೇ ತಿಂಗಳು ದಿನಾಂಕ : 26.03.2011 ರಂದು ಜಗತ್ತು ಶಕ್ತಿ ಬಳಕೆಗೆ ಪೂರಕ ಕ್ರೀಯೆಗಳನ್ನು ಸ್ವತಃ ನಿಷೇದಿಸಬೇಕಾಗಿ ಡಬ್ಲೂ.ಡಬ್ಲೂ.ಎಫ್. (ವಲ್ಡ ವೈಲ್ಡಲೈಫ್ ಫೆರಡರೇಷನ್) ದವರು ವಿನಂತಿಸಿದ್ದಾರೆ. ಅಂದು ಒಂದು ಘಂಟೆ ವರೆಗೆ ಯಾವುದೇ ರೀತಿಯ ಶಕ್ತಿಯ ಉಪಯೋಗವನ್ನು ಮಾಡಬಾರದು, ಅದರಲ್ಲಿ ಟಿ.ವ್ಹಿ., ಕಂಪ್ಯೂಟರ್, ಲೈಟ್, ವಿದ್ಯುತ್, ಕಾರಖಾನೆ, ವಾಹನ, ಹೋಟೇಲ್ ಉದ್ಯಮ ಅಷ್ಟೇ ಅಲ್ಲಾ ಒಟ್ಟಾರೆ ಶಕ್ತಿ ಬಳಕೆಯನ್ನೇ ನಿಷೇದಿಸಲು ವಿನಂತಿಸಿದ್ದಾರೆ. ಏಕೆಂದರೆ,

ಕಾರಣ ಮಾನವ ಜೀವಿ ಭೂಮಿಯ ಮೇಲೆ ಹುಟ್ಟಿದಾಗಿನಿಂದ ಒಂದಿಲ್ಲೊಂದು ಕ್ರೀಯೆಗಳಲ್ಲಿ ತೊಡಗಿದ್ದಾನೆ. ಪ್ರಗತಿ, ಬೆಳವಣಿಗೆ ಅನ್ನುತ್ತಾ ವಾತಾವರಣದ ವಿರುದ್ಧ ಕ್ರೀಯೆಗಳನ್ನು ಮಾಡುತ್ತಾ, ವಾತಾವರಣವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯುವ ಆಸೆಯಿಂದ ಪ್ರಕೃತಿಯ ನಿಯಮಗಳನ್ನು ಗಾಳಿಗೆ ತೊರಿದ್ದಾನೆ. ಪ್ರಾಣಿಯಂತೆ ಓಡಬೇಕೆಂಬ ಬಯಕೆಯಿಂದ ದ್ವಿಚಕ್ರ ಅಷ್ಟೇ, ನಾಲ್ಕು ಆರು ಎಂಟು ಗಾಲಿಗಳ ವಾಹನಗಳನ್ನು ಕಂಡು ಹಿಡಿದ, ಹಕ್ಕಿಯಂತೆ ಹಾರುವ ಆಸೆಯಿಂದ ವಿಮಾನ, ಹೆಲಿಕ್ಯಾಪ್ಟರ್, ರಾಕೇಟಗಳನ್ನು ಕಂಡು ಹಿಡಿದ, ಮೀನಿನಂತೆ ನೀರಿನ ಮೇಲೆ ಹರಿಯುವ ಆಸೆಯಿಂದ ಹಡಗುಗಳನ್ನು ಕಂಡು ಹಿಡಿದ ಆದರೆ ಮಾನವ ಮನುಷ್ಯನಾಗಲು ಬೇಕಾಗುವ ಮಾನವೀಯ ಗುಣಗಳನ್ನು ಬೆಳಸಿಕೊಳ್ಳುವುದನ್ನು ಮರೆತ. ಯಾವುದೇ ಒಂದು ವಸ್ತುವಿನ ಉಪಯೋಗ ಅಥವಾ ದುರುಪಯೋಗ ಎನ್ನುವುದು ಆ ವಸ್ತುವಿನ ಬಳಕೆ ಮಾಡುವ ಮನಸ್ಸಿನ ಮೇಲೆ ನಿಂತಿರುತ್ತದೆ. ಹಾಗೆ ಇಂದು ನಮ್ಮಿಂದ ತಯಾರಿಸಲ್ಪಟ್ಟ ವಸ್ತುಗಳಿಂದಾನೆ ನಮಗೆ ವಿನಾಶದ ಕಾಟ ಶುರುವಾಗಿದೆ. ಅದು ಪರಮಾಣು ವಿಕಿರಣಗಳಾಗಿರಬಹುದು, ವಾಹನಗಳಿಂದಾ ಹೊರಬೀಳುವ ಬೂದಿಯಿಂದ ಇರಬುಹುದು, ನೀರು, ಗಾಳಿ, ಭೂಮಿಯನ್ನು ಕಲುಷಿತಗೊಳಿಸುವಲ್ಲಿ ಎಷ್ಟು ಸಾಧ್ಯಾನೋ ಅಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಅದರಿಂದಾಗುತ್ತಿರುವ ಪರಿಣಾಮಗಳನ್ನು ನಮ್ಮ ಕಣ್ಣಾರೆ ನಾವು ನೋಡುತ್ತಿದ್ದೇವೆ. ಈಗ ಪ್ರಕೃತಿ ನಮಗೆ ಕೊಡುತ್ತಿರುವ ಪ್ರತಿಕ್ರೀಯೆ ಅದು ಸಹಜ ಅಲ್ಲವೆ. ಅದಕ್ಕಾಗಿ ಅದರಿಂದ ಪಾರಾಗುವ ಒಂದು ಯತ್ನವಾಗಿ ಡಬ್ಲೂ.ಡಬ್ಲೂ.ಎಫ್. (ವಲ್ಡ ವೈಲ್ಡಲೈಫ್ ಫೆರಡರೇಷನ್) ದವರು ಈ ಒಂದು ಅಂಶವನ್ನು ಕಂಡು ಕೊಂಡಿದ್ದಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಈ ಶಕ್ತಿ ಪ್ರಯೋಗವನ್ನು ಹೊರತುಪಡಿಸಿ ಜೀವಿಸುವುದನ್ನು ಕಲಿಯಬೇಕು ಎಂಬುದನ್ನು ಮನನ ಮಾಡಲು ಈ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದು ಪ್ರಾರಂಭವಾಗಿದ್ದು, ಆಸ್ಟ್ರೀಲಿಯಾದ ಸಿಡ್ನಿಯಲ್ಲಿ 2007 ರಲ್ಲಿ 2.2 ಮಿಲಿಯನ್ ದಷ್ಟು ಜನ ತಮ್ಮ ವ್ಯವಹಾರಗಳನ್ನು ಒಂದು ಗಂಟೆಗಳ ಕಾಲ ಬಂದ ಮಾಡಿದ್ದರು. ಅದು ಹಾಗೆ ಮುಂದುವರೆದು ಮುಂದಿನ ಒಂದು ವರುಷದಲ್ಲಿ 370 ನಗರಗಳಿಗೆ 37 ದೇಶಗಳಿಗೆ ಮುಂದುವರೆಯಿತು. ಅಲ್ಲದೆ ಇದಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯಿತು. 2010 ರಲ್ಲಿ ಎಲ್ಲ ಜಾಗತಿಕ ದಾಖಲೆಗಳನ್ನು ಮೀರಿ ಇದು ಬೆಳೆಯಿತು 1.3 ಬಿಲಿಯನ ಜನರನ್ನು 4616 ನಗರಗಳನ್ನು 128 ದೇಶಗಳನ್ನು ತಲುಪಿದೆ.

ಸಧ್ಯ ಭಾರತದಲ್ಲಿ ಇದಕ್ಕೆ brand ambassador ಆಗಿ ವಿದ್ಯಾ ಬಾಲನ್ ಅವರು ಆಯ್ಕೆಯಾಗಿದ್ದಾರೆ. ಅವರೆ ಹೇಳುವಂತೆ ನೀವು ಒಂದು ಗಂಟೆಯವರೆಗೆ ನಿಮ್ಮ ಕಂಪ್ಯೂಟರ್ ನಲ್ಲಿ ಕೆಲಸವನ್ನು ನಿಷೇಧಿಸಿ, ಚಾಟಮಾಡುವುದನ್ನು ಬಿಡಿ, ಅಂದು ನಡೆಯುವ ಕ್ರೀಕೆಟ್ ಮ್ಯಾಚನ್ನು ನೋಡದೇ ಬರಿ ಉಹಿಸಿಕೊಳ್ಳಿ ಅದು ಒಂದು ತರಹದ ರೊಮಾಂಚನ ಅನುಭವವಾಗುವುದು ಎಂದು ಹೇಳಿದ್ದಾರೆ. ಹಾಗಾದರೆ ನೀವು ಕೂಡಾ ಒಂದು ಗಂಟೆಕಾಲ ಶಕ್ತಿ ಬಳಕೆಯನ್ನು ನಿಷೇದಿಸುತ್ತೀರಿ ತಾನೆ.