Search This Blog

Thursday, May 26, 2011

(ಅ) ನೈತಿಕ

ಯಾವುದೇ ಒಂದು ಜನಾಂಗ ಅಥವಾ ನಾಗರಿಕತೆ ಬೆಳೆಯ ಬೇಕೆಂದರೆ ಸಂತಾನೋತ್ಪತ್ತಿ ಅತೀ ಮಹತ್ವ ಹಾಗೂ ಅವಶ್ಯಕವಾದ ಅಂಶವಾಗುತ್ತದೆ. ಈ ನಿಟ್ಟಿನಲ್ಲಿ ಹೆಣ್ಣು ಗಂಡಿನ ನಡುವೆ ನೈಸರ್ಗಿಕವಾಗಿ ನಡೆಯುವ ಸಂಮ್ಮಿಲನ (ಸೆಕ್ಸ) ಕ್ರೀಯೆಗೆ ಅತೀ ಪ್ರಾಮುಖ್ಯತೆ ಕೊಡಲಾಗಿದೆ. ಗಂಡು ಮೊದಲು ಅಥವಾ ಹೆಣ್ಣು ಮೊದಲು ಎಂಬ ಪ್ರಶ್ನೆಗೆ ಉತ್ತರ ಇನ್ನೂವರೆಗೂ ಸಿಕ್ಕಲ್ಲ. ಅದೇನೆ ಇರಲಿ ಸಧ್ಯ ಮಾನವ ಜನಾಂಗ ಇಲ್ಲಿಯವರೆಗೂ ಮುಟ್ಟಿರುವುದಕ್ಕೆ ಮೊದಲು ಹುಟ್ಟಿದ ಆ ಗಂಡು ಹೆಣ್ಣಿಗೂ ಹಾಗೂ ಅವರ ಸಂಭೋಗದಿಂದ ಜನ್ಮ ತಳೆದ ಮೊದಲ ಮಗುವಿಗೂ ಒಂದು ಸಲಾಮ್ ಹೇಳೋಣ.
ಪ್ರತಿಯೊಂದು ಜನಾಂಗ ಬೆಳೆಯುತ್ತಾ ಬೆಳೆಯುತ್ತಾ ತನ್ನದೇ ಆದ ಸಂಪ್ರದಾಯವನ್ನು ಅಳವಡಿಸಿಕೊಳ್ಳುತ್ತದೆ. ಜನಾಂಗದಿಂದ ಜನಾಂಗಕ್ಕೆ ಸಂಪ್ರದಾಯಗಳು ಬಿನ್ನವಾಗುತ್ತ ಹೋಗುತ್ತವೆ. ಹಾಗೆ ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಕೆಲವು ನಿಯಮಗಳು ಕಟ್ಟಳೆಗೆ ಒಳಪಟ್ಟರೆ ಕ್ರೈಸ್ತ್, ಮುಸ್ಲಿಂ, ಸಿಖ್, ಜೈನ್ . . . ಹೀಗೆ ಬೇರೆ ಬೇರೆ ಜನಾಂಗಳಲ್ಲಿ ಆ ನಿಯಮಗಳಿಗೆ ಮಣ್ಣನೆ ದೊರೆತಿರಬಹದು. ಇನ್ನೂ ಕೆಲವೊಂದು ಸಂಪ್ರದಾಯಗಳು ಅವರಲ್ಲಿ ತಿರಸ್ಕಾರಕ್ಕೊಳಪಟ್ಟರೆ ಅಂತವುಗಳು ನಮ್ಮಲ್ಲಿ ಪುರಸ್ಕಾರಕ್ಕೆ ಒಳಗಾಗಿರಬಹದು. ಉದಾ : ಮುಸ್ಲಿಂ ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳು ಮೂಖಕ್ಕೆ ಬುರಖಾ ಹಾಕಿಕೊಳ್ಳುವುದು, ಯಾವುದೇ ಪ್ರಾರ್ಥನಾ ಮಂದಿರಗಳಲ್ಲಿ ಪ್ರವೇಶ ಇಲ್ಲದಿರುವುದು. ಹಾಗೆ ಹಣೆಯಲ್ಲಿ ಕುಂಕುಮ, ನಾಮ, ತಿಲಕ ವಿಟ್ಟುಕೊಳ್ಳುವುದು, ಸಿಖ್ ರು ಮೂಖದಲ್ಲಿ ಮೀಸೆ, ಗಡ್ಡ ಬಿಟ್ಟು, ತೆಲೆಗೆ ಪೇಟಾ ಸುತ್ತಿ, ಕೈಯಲ್ಲಿ ಖಡೆ ಹಾಗೂ ತಲವಾರ ಇರಿಸಿಕೊಳ್ಳುವುದು ಶೋಭಾಯಮಾನ ಎಂದು ಪರಿಗಣಿಸ್ಪಡುತ್ತದೆ.


ಇನ್ನು ಇದೇ ಸಂಪ್ರದಾಯಗಳು ಸೆಕ್ಸ್ ಅಥವಾ ಲೈಂಗಿಕತೆಗೆ ಬಂದರೆ ಅವುಗಳು ಕೂಡಾ ಒಂದು ದೇಶದಿಂದ ಇನ್ನೋಂದು ದೇಶಕ್ಕೆ ಭಿನ್ನ ಭಿನ್ನವಾಗುತ್ತ ಹೋಗುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಷ್ಟ ನಮ್ಮ ದೇಶದಲ್ಲಿ ಅದು ತುಂಬಾ ಸುಲಭ ಹಾಗೆ ನಮ್ಮಲ್ಲಿ ಎಲ್ಲೆಂದರಲ್ಲಿ ಹುಡುಗಾ ಹುಡುಗಿ ಮುತ್ತು ಕೊಡುವುದು ನಿಷೇದ ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದು ತುಂಬಾ ಸರಳ. ಭಾರತ ದೇಶದಲ್ಲಿ ಹುಟ್ಟಿನಿಂದ ಸಾಯುವವರೆಗೆ ಎಲ್ಲದಕ್ಕೂ ತಮ್ಮದೇ ಆದ ಕಟ್ಟಳೆಗಳನ್ನು, ನಿಯಮಗಳನ್ನು ಹಾಕಿದ್ದಾರೆ. ಹಾಗೆಯೇ ಲೈಂಗಿಕತೆಗೂ ಒಂದು ಕಟ್ಟಳೆ ಹಾಕಿ ವಿವಾಹ ಎನ್ನುವ ನಿರ್ಬಂಧವನ್ನು ಹೇರಿದ್ದಾರೆ. ಒಂದು ಗಂಡು-ಹೆಣ್ಣಿನ ನಡುವೆ ವಿವಾಹ ಪೂರ್ವ ಹಾಗೂ ವಿವಾಹದ ಹೊರಗಡೆ ನಡೆಸುವ ಸೆಕ್ಸನ್ನು ನಮ್ಮ ದೇಶ ಒಪ್ಪುವದಿಲ್ಲ. ಆದರೆ ಬೇರೆ ರಾಷ್ಟ್ರಗಳಲ್ಲಿ ಅದೇಲ್ಲಾ ಸಿಗರೇಟು ವಿಸ್ಕಿ ಕುಡಿದಷ್ಟು ಸರಳ ವ್ಯವಹಾರವಾಗಿದೆ. ಸಂಪ್ರದಾಯ ಎನ್ನುವ ಆ ಚೌಕಟ್ಟನ್ನು ತೆಗೆದು ನೋಡಿದಾಗ ಅಲ್ಲಿ ನಡೆಯುವುದು ಅದೇ ಕ್ರೀಯೆ. ಎರಡು ಮನಸ್ಸು ಹಾಗೂ ಎರಡು ದೇಹಗಳ ಒಂದು ಗೂಡುವಿಕೆ. ಆದರೆ ನಮ್ಮ ದೇಶದ ಸಂಸ್ಕೃತಿಯಲ್ಲಿ ಯಾವೊದನ್ನು ತಾತ್ಪೂರ್ತಿಕವಾಗಿ ಕಂಡಿಲ್ಲಾ ಎಲ್ಲ ಸಂಬಂಧಗಳಿಗೂ ಶಾಸ್ವತತೆಯನ್ನು ಕೊಟ್ಟಿದೆ. ನಮ್ಮ ಪೂರ್ವಜರು ಲೈಂಗಿಕ ಕ್ರೀಯೆ ಕೇವಲ ತಾತ್ಕಾಲಿಕ ಸುಖಃ ಗೋಸ್ಕರವಾಗಿ ನಡೆದು ಮುಗಿಯುವುದಲ್ಲಾ ಎಂದು ಅರಿತು ಅದಕ್ಕೆ ಶಾಸ್ವತವಾದ ವಿವಾಹ ಎನ್ನುವ ಬೆಸುಗೆಯನ್ನು ಹಾಕಿದ್ದಾರೆ. ಸಧ್ಯ ಏಡ್ಸ ಎನ್ನುವ ಮಹಾ ಮಾರಿಗೆ ಹೆದರಿ ಇಡೀ ಜಗತ್ತು ಭಾರತೀಯ ವಿವಾಹದ ಸಂಪ್ರದಾಯವನ್ನು ಒಪ್ಪಿಕೊಂಡು ಅನುಸರಿಸುತ್ತಲಿದೆ. ಒಂದು ಗಂಡಿಗೆ ಒಂದೇ ಹೆಣ್ಣು, ಒಂದು ಹೆಣ್ಣಿಗೆ ಒಂದೇ ಗಂಡು ಎನ್ನುವ ನಿಯಮ ಪಾಲಿಸುವತ್ತ ಇಡೀ ಜಗತ್ತು ವಿಚಾರಿಸುತ್ತಿದೆ. ವಿವಾಹದ ಹೊರಗಡೆ ನಡೆಯುವ ಎಲ್ಲ ದೈಹಿಕ ಸಂಬಂಧಗಳನ್ನು ಅನೈತಿಕ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇದರಿಂದ ದೈಹಿಕ, ಮಾನಸಿಕ ನೆಮ್ಮದಿ ಹಾಳಾಗುತ್ತದೆ ಅಷ್ಟೇ ಅಲ್ಲ ಅದೇಷ್ಟೋ ಸಂಸಾರಗಳು ಹಾಳಾಗಿವೆ.
ಅಷ್ಟಕ್ಕೂ ಈ ಅನೈತಿಕ ಸಂಬಂಧಗಳು ಯಾಕೆ ಹುಟ್ಟುತ್ತವೆ ಎಂದು ವಿಚಾರಿಸಲಾಗಿ ಇಂದಿನ ಗಡಿಬಿಡಿ ಜೀವನ ಶೈಲಿಯಲ್ಲಿ ಗಂಡ ಹೆಂಡತಿ ಇಬ್ಬರು ತಮ್ಮ ಸಂಸಾರದ ನೊಗವನ್ನು ಸಮವಾಗಿ ಹಂಚಿಕೊಂಡು ಜೀವನ ನಡೆಸುತ್ತಿದ್ದಾರೆ. ಇಬ್ಬರು ತಮ್ಮ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಇದರಿಂದ ಒಬ್ಬರಿಗೋಬ್ಬರು ನೋಡುದಕ್ಕಾಗಿ ವಿಕೇಂಡ್ ನ ದಾರಿ ಕಾಯಬೇಕಾಗುತ್ತದೆ. ಹಾಗಾದಾಗ ಮನಸ್ಸು ಅಂತಹ ಖಾಲಿಯಾದ ಆ ಜಾಗದಲ್ಲಿ ಒಂದು ಸಹ ಹೃದಯವನ್ನು ಬಯಸುವುದು ತುಂಬಾ ಸಹಜ. ಹೀಗೆ ತಮ್ಮ ಒಡನಾಟದಲ್ಲಿ ಬರುವ ಕೋ-ವರ್ಕರ್ ಗಳೊಂದಿಗೆ ಗಂಡ ಹಾಗೂ ತಮ್ಮ ಮನೆಯ ಸುತ್ತ ಇರುವ ಹುಡುಗನೊಂದಿಗೆ ಹೆಂಡತಿ ಸಣ್ಣದೊಂದು ಗೆಳೆತನ ಪ್ರಾರಂಭಿಸುತ್ತಾರೆ. ಮುಂದೆ ಅದೇ ಒಂದು ಪ್ರೇಮವಾಗಿ ಬೆಳೆಯುತ್ತದೆ. ಇದ್ದ ಸಂಸಾರದಲ್ಲಿಯ ತಾಪತ್ರಯಗಳನ್ನು ಸರಿದೂಗಿಸಲು ಪ್ರಾರಂಭಿಸಿದ ಹೊಸ ಸಂಬಂಧ ಮುಂದೆ ಅದೇ ಒಂದು ತಾಪತ್ರಯವಾಗಿ ಪರಿಣಮಿಸುತ್ತದೆ. ಅದರಿಂದ ಹೊರಬರುವಲ್ಲಿ ಇದ್ದ ಸಂಸಾರ ಸರಿಯಾಗಿ ಉಳೀಯುತ್ತದೆ ಎನ್ನುವ ಭರವಸೆ ಸಹಿತ ಉಳಿಯುದಿಲ್ಲ. ಅದನ್ನು ಅರಿತ ನಮ್ಮ ಪೂರ್ವಜರು ಅದಕ್ಕೆ ಒಂದು ಸಂಪ್ರದಾಯವನ್ನು ಹಾಕಿದ್ದಾರೆ. ಪ್ರೀತಿ ಅದೇಷ್ಟೇ ಆಳವಾಗಿರಲಿ, ಗಾಢವಾಗಿರಲಿ, ಅದು ಸಂಪ್ರದಾಯ ಬದ್ದವಾಗಿರದಿದ್ದರೆ ಅದನ್ನು ಅನೈತಿಕತೆ ಎನ್ನುತ್ತದೆ ಸಂಫ್ರದಾಯ. ಅದಕ್ಕೆ ಹೆಂಡತಿ ಹೆಂತವಳೇ ಇರಲಿ ಗಂಡ ಹೆಂತವನೇ ಇರಲಿ ಅವರೊಂದಿಗೆ ಕಡೆತನಕ ಜೀವನ ಸಾಗಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಕಾರಣ ಲೈಂಗಿಕತೆ ಸುರಕ್ಷಿತ ವಾಗಿದ್ದರೆ ಸಮಾಜ ಸುರಕ್ಷಿತವಾಗಿರುತ್ತದೆ.

ಅದೆನೇ ಇರಲಿ ನೈತಿಕ-ಅನೈತಿಕತೆಯ ಗೊಡವೆಯನ್ನು ಬಿಡಿ, ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುವುದಿದೆ. ಆದಷ್ಟು ಬೇಗ ಸಾಂಪ್ರದಾಯಕವಾಗಿ ಮದುವೆಯಾಗಿ ಗಂಡ-ಹೆಂಡತಿ ಜೊತೆಯಾಗಿ ಮಳೆಗಾಲದ ಸವಿಯನ್ನು ಸವಿಯಿರಿ ಎನ್ನುತ್ತ ಮುಗಿಸುತ್ತೇನೆ.

Saturday, April 30, 2011

ನನ್ನ ಪ್ರೀತಿಯ ಹುಡುಗಿಯ ಕಣ್ಣುಗಳಿಗೆ. . .

ಪ್ರೇಮವೆಂಬುದು ಒಡೆಯಲಾರದ ಒಗಟು ಅದು ಕ್ಷಣಿಕವೋ ಅಮರವೋ ದೇವರೆ ಬಲ್ಲ.
ಹ್ಯೋಗೋ.

ಮೂಕ ವೇದನೆ.




ತಿಳಿಗೊಳದಲ್ಲಿ ಸುಳಿದ ನಕ್ಷತ್ರ ಮೀನು ನೀನು

ನೋಟ ಒಂದೇ ಕ್ಷಣ,

ಸೇಳೆದು ನಿಲ್ಲಿಸಿದೆ ಕಣ್ಣಲ್ಲಿ ಈ ಸುಡುವೆದೆಗೆ ಸಂದ

ಪ್ರೀತಿಯ ಪಾರಿಜಾತ ನೀನು, ನೋವು ನೀಗಿ ಆಗಸಕ್ಕೆ

ಹೂವು ಮೂಡಿಸಿದೆ. ಬಾಳಿನ ಕೊಳಲ ದನಿಯಲ್ಲಿ ಹರಿದ

ಪ್ರೀತಿಯ ಪಿಸು ಮಾತು ನೀನು. ಹಿಗ್ಗರಳಿ ಒಳಗೆ ಕನಸ

ಚಲ್ಲಿವೆ ಚಂದಿರನ ಬೆಳಕಲ್ಲಿ.

ನಿನ್ನೊಳಗೆ ನನ್ನ ಕಳಕೊಂಡ ಮರುಗಳಿಗೆ ನಾನು ನಾನಲ್ಲ

ನಾನು ಇದ್ದೇನಾದರೂ ಎಲ್ಲಿ ? ನಿನ್ನಲ್ಲಿ,

ಒಣಗಿದ ಈ ಒಂಟಿ ಕೊಂಬೆಯ ತುಂಬಾ

ಪ್ರೀತಿಯ ಹೂವು ಅರಳಿದವು ನಿನ್ನವು.

ಬಿ. ಎನ್. ಮಲ್ಲೇಶ.

Thursday, March 24, 2011

60+ Earth Hour 2011’ (ಒಂದು ಘಂಟೆವರೆಗೆ ಪ್ರಪಂಚದ ಶಕ್ತಿ ಬಳಕೆ ನಿಷೇದ)

ಇದೇ ತಿಂಗಳು ದಿನಾಂಕ : 26.03.2011 ರಂದು ಜಗತ್ತು ಶಕ್ತಿ ಬಳಕೆಗೆ ಪೂರಕ ಕ್ರೀಯೆಗಳನ್ನು ಸ್ವತಃ ನಿಷೇದಿಸಬೇಕಾಗಿ ಡಬ್ಲೂ.ಡಬ್ಲೂ.ಎಫ್. (ವಲ್ಡ ವೈಲ್ಡಲೈಫ್ ಫೆರಡರೇಷನ್) ದವರು ವಿನಂತಿಸಿದ್ದಾರೆ. ಅಂದು ಒಂದು ಘಂಟೆ ವರೆಗೆ ಯಾವುದೇ ರೀತಿಯ ಶಕ್ತಿಯ ಉಪಯೋಗವನ್ನು ಮಾಡಬಾರದು, ಅದರಲ್ಲಿ ಟಿ.ವ್ಹಿ., ಕಂಪ್ಯೂಟರ್, ಲೈಟ್, ವಿದ್ಯುತ್, ಕಾರಖಾನೆ, ವಾಹನ, ಹೋಟೇಲ್ ಉದ್ಯಮ ಅಷ್ಟೇ ಅಲ್ಲಾ ಒಟ್ಟಾರೆ ಶಕ್ತಿ ಬಳಕೆಯನ್ನೇ ನಿಷೇದಿಸಲು ವಿನಂತಿಸಿದ್ದಾರೆ. ಏಕೆಂದರೆ,

ಕಾರಣ ಮಾನವ ಜೀವಿ ಭೂಮಿಯ ಮೇಲೆ ಹುಟ್ಟಿದಾಗಿನಿಂದ ಒಂದಿಲ್ಲೊಂದು ಕ್ರೀಯೆಗಳಲ್ಲಿ ತೊಡಗಿದ್ದಾನೆ. ಪ್ರಗತಿ, ಬೆಳವಣಿಗೆ ಅನ್ನುತ್ತಾ ವಾತಾವರಣದ ವಿರುದ್ಧ ಕ್ರೀಯೆಗಳನ್ನು ಮಾಡುತ್ತಾ, ವಾತಾವರಣವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯುವ ಆಸೆಯಿಂದ ಪ್ರಕೃತಿಯ ನಿಯಮಗಳನ್ನು ಗಾಳಿಗೆ ತೊರಿದ್ದಾನೆ. ಪ್ರಾಣಿಯಂತೆ ಓಡಬೇಕೆಂಬ ಬಯಕೆಯಿಂದ ದ್ವಿಚಕ್ರ ಅಷ್ಟೇ, ನಾಲ್ಕು ಆರು ಎಂಟು ಗಾಲಿಗಳ ವಾಹನಗಳನ್ನು ಕಂಡು ಹಿಡಿದ, ಹಕ್ಕಿಯಂತೆ ಹಾರುವ ಆಸೆಯಿಂದ ವಿಮಾನ, ಹೆಲಿಕ್ಯಾಪ್ಟರ್, ರಾಕೇಟಗಳನ್ನು ಕಂಡು ಹಿಡಿದ, ಮೀನಿನಂತೆ ನೀರಿನ ಮೇಲೆ ಹರಿಯುವ ಆಸೆಯಿಂದ ಹಡಗುಗಳನ್ನು ಕಂಡು ಹಿಡಿದ ಆದರೆ ಮಾನವ ಮನುಷ್ಯನಾಗಲು ಬೇಕಾಗುವ ಮಾನವೀಯ ಗುಣಗಳನ್ನು ಬೆಳಸಿಕೊಳ್ಳುವುದನ್ನು ಮರೆತ. ಯಾವುದೇ ಒಂದು ವಸ್ತುವಿನ ಉಪಯೋಗ ಅಥವಾ ದುರುಪಯೋಗ ಎನ್ನುವುದು ಆ ವಸ್ತುವಿನ ಬಳಕೆ ಮಾಡುವ ಮನಸ್ಸಿನ ಮೇಲೆ ನಿಂತಿರುತ್ತದೆ. ಹಾಗೆ ಇಂದು ನಮ್ಮಿಂದ ತಯಾರಿಸಲ್ಪಟ್ಟ ವಸ್ತುಗಳಿಂದಾನೆ ನಮಗೆ ವಿನಾಶದ ಕಾಟ ಶುರುವಾಗಿದೆ. ಅದು ಪರಮಾಣು ವಿಕಿರಣಗಳಾಗಿರಬಹುದು, ವಾಹನಗಳಿಂದಾ ಹೊರಬೀಳುವ ಬೂದಿಯಿಂದ ಇರಬುಹುದು, ನೀರು, ಗಾಳಿ, ಭೂಮಿಯನ್ನು ಕಲುಷಿತಗೊಳಿಸುವಲ್ಲಿ ಎಷ್ಟು ಸಾಧ್ಯಾನೋ ಅಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಅದರಿಂದಾಗುತ್ತಿರುವ ಪರಿಣಾಮಗಳನ್ನು ನಮ್ಮ ಕಣ್ಣಾರೆ ನಾವು ನೋಡುತ್ತಿದ್ದೇವೆ. ಈಗ ಪ್ರಕೃತಿ ನಮಗೆ ಕೊಡುತ್ತಿರುವ ಪ್ರತಿಕ್ರೀಯೆ ಅದು ಸಹಜ ಅಲ್ಲವೆ. ಅದಕ್ಕಾಗಿ ಅದರಿಂದ ಪಾರಾಗುವ ಒಂದು ಯತ್ನವಾಗಿ ಡಬ್ಲೂ.ಡಬ್ಲೂ.ಎಫ್. (ವಲ್ಡ ವೈಲ್ಡಲೈಫ್ ಫೆರಡರೇಷನ್) ದವರು ಈ ಒಂದು ಅಂಶವನ್ನು ಕಂಡು ಕೊಂಡಿದ್ದಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಈ ಶಕ್ತಿ ಪ್ರಯೋಗವನ್ನು ಹೊರತುಪಡಿಸಿ ಜೀವಿಸುವುದನ್ನು ಕಲಿಯಬೇಕು ಎಂಬುದನ್ನು ಮನನ ಮಾಡಲು ಈ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದು ಪ್ರಾರಂಭವಾಗಿದ್ದು, ಆಸ್ಟ್ರೀಲಿಯಾದ ಸಿಡ್ನಿಯಲ್ಲಿ 2007 ರಲ್ಲಿ 2.2 ಮಿಲಿಯನ್ ದಷ್ಟು ಜನ ತಮ್ಮ ವ್ಯವಹಾರಗಳನ್ನು ಒಂದು ಗಂಟೆಗಳ ಕಾಲ ಬಂದ ಮಾಡಿದ್ದರು. ಅದು ಹಾಗೆ ಮುಂದುವರೆದು ಮುಂದಿನ ಒಂದು ವರುಷದಲ್ಲಿ 370 ನಗರಗಳಿಗೆ 37 ದೇಶಗಳಿಗೆ ಮುಂದುವರೆಯಿತು. ಅಲ್ಲದೆ ಇದಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯಿತು. 2010 ರಲ್ಲಿ ಎಲ್ಲ ಜಾಗತಿಕ ದಾಖಲೆಗಳನ್ನು ಮೀರಿ ಇದು ಬೆಳೆಯಿತು 1.3 ಬಿಲಿಯನ ಜನರನ್ನು 4616 ನಗರಗಳನ್ನು 128 ದೇಶಗಳನ್ನು ತಲುಪಿದೆ.

ಸಧ್ಯ ಭಾರತದಲ್ಲಿ ಇದಕ್ಕೆ brand ambassador ಆಗಿ ವಿದ್ಯಾ ಬಾಲನ್ ಅವರು ಆಯ್ಕೆಯಾಗಿದ್ದಾರೆ. ಅವರೆ ಹೇಳುವಂತೆ ನೀವು ಒಂದು ಗಂಟೆಯವರೆಗೆ ನಿಮ್ಮ ಕಂಪ್ಯೂಟರ್ ನಲ್ಲಿ ಕೆಲಸವನ್ನು ನಿಷೇಧಿಸಿ, ಚಾಟಮಾಡುವುದನ್ನು ಬಿಡಿ, ಅಂದು ನಡೆಯುವ ಕ್ರೀಕೆಟ್ ಮ್ಯಾಚನ್ನು ನೋಡದೇ ಬರಿ ಉಹಿಸಿಕೊಳ್ಳಿ ಅದು ಒಂದು ತರಹದ ರೊಮಾಂಚನ ಅನುಭವವಾಗುವುದು ಎಂದು ಹೇಳಿದ್ದಾರೆ. ಹಾಗಾದರೆ ನೀವು ಕೂಡಾ ಒಂದು ಗಂಟೆಕಾಲ ಶಕ್ತಿ ಬಳಕೆಯನ್ನು ನಿಷೇದಿಸುತ್ತೀರಿ ತಾನೆ.