Search This Blog

Tuesday, August 23, 2011

ತಿಲಾಂಜಲಿ ಇಟ್ಟಿತ್ತೇ ಭಾರತ ಬ್ರಷ್ಟಾಚಾರಕ್ಕೆ ?

ಮೊದಲು ಹಜಾರೆ ಅಜ್ಜ (ಣ್ಣ)ನಿಗೊಂದು ನಮಸ್ಕಾರ. ಏಕೆಂದರೆ ನರ ಸತ್ತ ನಾಯಿಯತರ ಜಿಡ್ಡು ಹಿಡಿದುಕೊಂಡು ಮಲಗಿರುವ ನಮ್ಮ ಭಾರತೀಯ ನಾಗರಿಕರಿಗೆ ಒಂದು ರೀತಿ ಸಂಜಿವೀನಿಯಂತಾಗಿ ಕಂಡು ಬಂದ ಮನುಷ್ಯ ಅಣ್ಣಾ ಹಜಾರೆ. ಬ್ರಷ್ಟಾಚಾರದ ಪಾಪ ಕೂಪದಲ್ಲಿ ಬಿದ್ದು ಒದ್ದಾಡುತ್ತಿರುವ ನಮಗೆಲ್ಲರಿಗೂ ಅದನ್ನು ಮೀರಿ ಬದುಕಲು, ಹೊರನಿಲ್ಲಲು ಸಾಧ್ಯವೆಂಬ ಒಂದು ಆಶಾಕಿರಣವನ್ನು ತೋರಿಸಿದ ಧೀರ ವ್ಯಕ್ತಿ.
ಸುಮಾರು ಕ್ರೀ. ಶ. 1600 ರಲ್ಲಿ ಭಾರತಕ್ಕೆ ಬ್ರಿಟಿಷರ ಎಂಟ್ರಿ ಅಲ್ಲಿಂದ 1947 ಅವರು ಇಲ್ಲಿಂದ ಎಕ್ಷ್ಸಿಟ್ ಆದ ವರ್ಷ. ಅಂದರೆ ಅಂದಾಜು 300 ರಿಂದ 350 ವರ್ಷಗಳ ಕಾಲ ಅವರು ಅನಾಮತ್ತಾಗಿ ನಮ್ಮನ್ನು ಆಳಿದರು. ಸಧ್ಯ ಸ್ವಾತಂತ್ರ್ಯ ಪಡೆದುಕೊಂಡು 60 ಕ್ಕೂ ಹೆಚ್ಚು ವರ್ಷಗತಿಸಿದರೂ ನಮಗೆ ಭಾರತ ನಮ್ಮದು ಅಂತಾ ಅನ್ನಿಸ್ತಾ ಇಲ್ಲಾ. ಇಲ್ಲಿ ಕಾಯ್ದೆ ನಿರ್ಮಿಸುವವರಿಗಿಂತ ಪಾಲಿಸುವವರಿಗಿಂತ ಮುರಿಯುವವರು ಹೆಚ್ಚಿದ್ದಾರೆ. ಒಬ್ಬರಿಗೆ ಅನ್ಯಾಯ ಮಾಡಿದರೆ ಮೋಸಮಾಡಿದರೆ ಅದು ನಮ್ಮವರಿಗೆ ನಾವೇ ಮೋಸ ಮಾಡುತ್ತಿದ್ದೇವೆ ಅನ್ನುವ ಭಾವ ಮನಸ್ಸಿನಲ್ಲಿ ಮೂಡುತ್ತಿಲ್ಲಾ. ಒಟ್ಟಾರೆ ಹುಚ್ಚಿ ಮದುವೆಯಲ್ಲಿ ಉಂಡವನೇ ಜಾಣ ಎಂಬತ್ತಾಗಿದೆ ದೇಶದ ಪರಿಸ್ಥಿತಿ.
ಒಬ್ಬ ಗುಮಾಸ್ತನಿಂದ ಹಿಡಿದು ಉನ್ನತಾತೀ ಉನ್ನತ ಅಧಿಕಾರಿ, ಮಂತ್ರಿಗಳವರೆಗೆ ಎಲ್ಲರೂ ಲಂಚಕ್ಕಾಗಿ ಬ್ರಷ್ಟಾಚಾರಕ್ಕಾಗಿ ಬಾಯ್ತೆರೆದು ನಿಂತಿದ್ದಾರೆ. ಸಣ್ಣ ಅತೀ ಸಣ್ಣ ಕೆಲಸವು ಕೂಡಾ ಲಂಚದ ಮೇಲೆ ಅವಲಂಬಿಸಿದೆ. ಲಂಚಾವತಾರ, ಬ್ರಷ್ಟಾಚಾರ ಎನ್ನುವುದು ಪಡೆಂಬೂತವಾಗಿ ಬೆಳೆದು ನಿಂತಿದೆ. ದೇಶದ ಯುವ ಜನತೆಗೆ ದಾರಿಕಾಣದಂತಾಗಿದೆ. ಇದೇ ಸಮಯದಲ್ಲಿ ಗಾಂಧೀಜಿಯನ್ನು ನಂಬಿದವ, ಅವರ ವಿಚಾರಗಳನ್ನು ಪಾಲಿಸುವವ, ಅವರ ಅನುಯಾಯಿ ಒಬ್ಬ ಇದೆಲ್ಲದರಿಂದ ಬೆಸತ್ತು ಮತ್ತೇ ಗಾಂಧೀಜಿಯ ತತ್ವಗಳನ್ನು ಹೇಳುತ್ತಾ, ಅವರ ನಿಯಮಗಳನ್ನು ಪಾಲಿಸುತ್ತಾ ಟೊಂಕಕಟ್ಟಿ ನಿಂತಿದ್ದಾನೆ. ಬ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತು ಉಪವಾಸ ಸತ್ಯಾಗ್ರಹ ಕೈಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾನೆ. ಜನ ಲೋಕಪಾಲ ಮಸೂದೆಯನ್ನು ಜಾರಿಯಲ್ಲಿ ತರಬೇಕು. ಸಕಲ ಪ್ರಜೆಗಳನ್ನು ಸಮಾನ ದೃಷ್ಟಯಿಂದ ಕಾಣುವಂತಾಗಬೇಕು. ಉನ್ನತ ಅಧಿಕಾರಿಗಳು, ಮಂತ್ರಿ ಮಹೋದಯರು ಈ ಕಾಯ್ದೆಯ ಅಡಿಯಲ್ಲಿ ಬರುವಂತಾಗಬೇಕು. ಪ್ರತಿ ಕೇಸು 06 ತಿಂಗಳಿಂದ 01 ವರ್ಷದೊಳಗೆ ಕೊನೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಸರ್ಕಾರ ಕಾಲಾವಧಿ ತೆಗೆದುಕೊಂಡರು ಅದನ್ನು ಪೂರ್ತಿಯಾಗಿ ಒಪ್ಪದೇ ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದನ್ನು ವಿರೋಧಿಸಿ ಮತ್ತೋಮ್ಮೆ ಉಪವಾಸ ಕೂಡಲು ಹೊರಟವರನ್ನು ನಿನ್ನೆ ಜೈಲಿಗೆ ಹಾಕಿ ರಾತ್ರಿ ಸುಮಾರಿಗೆ ಬಿಡುಗಡೆಗೊಳಿಸಿದೆ. ಏಕೆಂದರೆ ನಗರಕ್ಕೆ ನಗರಗಳಲ್ಲದೇ ಹಲವಾರು ರಾಜ್ಯಗಳಲ್ಲಿ ಹಾಗೂ ಪೂರ್ತಿಯಾಗಿ ದೇಶಕ್ಕೆ ದೇಶವೇ ಒಂದು ಗೂಡಿ ಧ್ವನಿ ಎತ್ತಿದ್ದಕ್ಕೆ ಮಣಿದು ಅವರಿಗೆ ಬಿಡುಗಡೆಗೊಳಿಸಿದ್ದಾರೆ. ಅದರಿಂದ ಅವರ ಬೆಂಬಲಕ್ಕೆ ನಿಂತವರೆಲ್ಲ ಖುಷಿ ಆಚರಿಸಿದ್ದೇವೆ.


ಇದು ಕೊನೆಯಲ್ಲಾ ಆರಂಭ ಮಾತ್ರ, ಪ್ರತಿ ಮನೆಯಲ್ಲಿ ಪ್ರತಿ ಮನದಲ್ಲಿ ಒಬ್ಬ ಹೋರಾಟಗಾರ ಹುಟ್ಟ ಬೇಕು. ದೇಶದ ಕಾನೂನು ಹೇಳುವ ಪ್ರಕಾರ ತಪ್ಪು ಮಾಡಿದವನಷ್ಟೇ ಅಲ್ಲಾ ಆ ತಪ್ಪು ಮಾಡಲು ಸಹಾಯ, ಪ್ರೂತ್ಸಾಹ, ಅನುಕೂಲ ಮಾಡಿಕೊಡುವವನು ಅಷ್ಟೇ ತಪ್ಪಿತಸ್ಥ ಎಂದು ಹಾಗಾದರೇ ಬ್ರಷ್ಟಾಚಾರಕ್ಕೆ ಕುಮ್ಮಕ್ಕೂ ಕೊಡುವವರು ಬ್ರಷ್ಟಾಚಾರಿಗಳಾದಂತೆ, ಸಧ್ಯ ಬೆರಳುಮಾಡಿ ತೋರಿಸಲು ಸಾಕಾದಷ್ಟು ಜನ ಸಿಗುತ್ತಾರೆ. ಬೆಂಬಲ ಸೂಚಿಸಲು ಎಲ್ಲರು ಬರುತ್ತಾರೆ. ಆದರೆ ಒಂದು ಪ್ರಶ್ನೆ ? ಬಂದ ಬೆಂಬಲಿಗರಲ್ಲಿ ನಾನು ಪ್ರಾಮಾಣಿಕನಾಗಿದ್ದೇನೆ ಅಥವಾ ಪ್ರಮಾನೀಕನಾಗಿರುತ್ತೇನೆ ಅಂತ ತಮ್ಮ ಆತ್ಮ ಸಾಕ್ಷಿಯನ್ನು ಮುಟ್ಟಿ ಪ್ರಮಾಣೀಕರಿಸುವವರು ಎಷ್ಟು ಜನರಿದ್ದಾರೆ. ಅದನ್ನು ಪಾಲಿಸುವವರು ಎಷ್ಟು ಜನ ಇದ್ದಾರೆ. ಯೋಚಿಸಿ ಇಲ್ಲಾ ಬೆರಳೆಣಿಕೆಯಷ್ಟು ಜನಾನೂ ಸಿಗೋದಿಲ್ಲಾ ಕಾರಣ ಪ್ರತಿಯೊಬ್ಬನಲ್ಲಿ ಅದು ಬ್ರಹ್ಮ ರಾಕ್ಷಸನ ಅವತಾರತಾಳಿದೆ.
ನಾವೆಲ್ಲ ಅವಕಾಶ ವಂಚಿತರು ಇಂದು ಬೆರಳುಮಾಡಿ ತೋರಿಸಲು ನಮಗೆ ತುಂಬಾ ಜನ ಸಿಗುತ್ತಾರೆ. ಆದರೆ ಅದೇ ಸ್ಥಳ, ಅದೇ ಅವಕಾಶ ನಮಗೆ ಸಿಕ್ಕಿದ್ದರೆ ನಾವು ಶಾಸ್ತ್ರಿ, ಗಾಂಧಿ, ವಿಶ್ವೇಶ್ವರಯ್ಯಾ ಅಥವಾ ಅಣ್ಣಾ ಹಜಾರೆ ತರಹ ಬಾಳುತ್ತಿದ್ದೇವಾ ? ಇಲ್ಲಾ ಕಂಡಿತಾ ಇಲ್ಲಾ ನಾವೂ ಕೂಡಾ ಲಾಲು, ಸಿಂದ್ಯಾ, ಚಂಪಂಗಿ, ರೇಣುಕಾಚಾರ್ಯ, ಗಣಿದಣಿಗಳು, 2ಜಿ ಸ್ಪೆಕ್ಟ್ರಮ್ ರಾಜಾ ರಂತೆ ಹಗರಣಗಳನ್ನು ಮಾಡಿಯಾದರೂ ಕೋಟ್ಯಾನು ಕೋಟಿ ಸಂಪಾದಿಸಿ ಸೈಡಿಗೆ ಇಡುತ್ತಿದ್ದೇವು. ಆದರೆ ಅವಕಾಶ ಸಿಕ್ಕಿಲ್ಲಾ ಅಷ್ಟೇ. ಇಲ್ಲಿಯ ಪ್ರತಿಯೊಬ್ಬನ ಮನಸ್ಸು ಕಲೂಷಿತಗೊಂಡಿದೆ. ಪರರ ವಸ್ತುಗಳಡೆ ಆಕರ್ಷಿತವಾಗುತ್ತಿದೆ. ಎಲ್ಲರಿಗೆ ಬೇರೆಯವರ ವಸ್ತುವಿನೆಡಿಗಿನ ವಾಂಚೆ ಹುಚ್ಚರನ್ನಾಗಿಸಿದೆ. ಅದು ತಪ್ಪಬೇಕು. ಸಾದಾ ಜೀವನ ಕ್ರಮ ಬೆಳಸಿಕೊಂಡು ಉಚ್ಚವಿಚಾರಗಳನ್ನು ಇಟ್ಟುಕೊಂಡು ಬದುಕುವುದನ್ನು ಕಲಿಯಬೇಕು. ಪ್ರತಿ ಮನ-ಮನೆ ಸ್ವಚ್ಛವಾದರೆ ನಿರ್ಮಲ ಗ್ರಾಮ ನಿರ್ಮಾಣವಾಗುವುದು ತಡವಿಲ್ಲ. ದೇಶ ಅಭಿವೃದ್ಧಿ ಹೊಂದಲು ಹೆಚ್ಚ ಸಮಯಬೇಕಾಗಿಲ್ಲ.

ಅದಕ್ಕೆ ಇಂದು ಅಣ್ಣಾ ಹಜಾರೆ ಮುನ್ನುಡಿಯನ್ನು ಬರೆದಿದ್ದಾರೆ. ಈ ಕಿಡಿ ನಾಳೆಯ ಉಜ್ವಲ ಭವಿಷ್ಯದಡೆಗೆ ನಮ್ಮನ್ನು ಮುನ್ನಡೆಸಲಿ ಎಂಬ ಆಶಾವಾದದೊಂದಿಗೆ ಮುಗಿಸುತ್ತಿದ್ದೇನೆ.

ನಿಮ್ಮವ

ಎ.ಜಿ. ವಿಜಿ.
ವಿಜಾಪೂರ.

2 comments:

 1. Thanks for this truly informative article.
  Anna Hazare is a brilliant leader, he is doing great work for indian people. We need a corruption free India.
  we r all with u anna ji...go ahead...

  ReplyDelete
 2. Nice article,

  we need people like Anna Hazare

  tumba dhanyavaadagalu uttama lekhana neediddakke

  ReplyDelete