ಹಿಗೋಂದು ಊರಲ್ಲಿ ಒಂದು ಬಡ ಕುಟುಂಬ ಬಟ್ಟೆಗೆ ಇದ್ದರೆ ತಿಂಡಿಗೆ ಇಲ್ಲಾ, ತಿಂಡಿಗಿದ್ದರೆ ಬಟ್ಟೆಬರೆಗಳಿಗೆ ಇಲ್ಲಾ. ಆ ಊರಿನ ಶ್ರೀಮಂತರ ಮನೆಗಳಲ್ಲಿ ಜೀತದ ಆಳಾಗಿ ಗಂಡ ದುಡಿಯುತ್ತಿದ್ದರೆ ಹೆಂಡತಿ ಅವರುಗಳ ಮನೆಗೆಲಸವನ್ನು ಮಾಡುತ್ತಿದ್ದಳು. ಅವರು ಕೊಟ್ಟ ಎಂಜಲು ಅಡುಗೆಯನ್ನೇ ಮನೆಗೆ ತಂದು ಬಿಸಿ ಮಾಡಿ ಗಂಡನಿಗೂ ಕೊಟ್ಟು ತಾನು ತಿನ್ನುತ್ತಿದ್ದಳು. ದಟ್ಟ ದಾರಿದ್ರ್ಯದ ಇನ್ನೊಂದು ಹೆಸರು ಅವರ ಬದುಕು. ಅದರಲ್ಲಿಯೂ ಅವರಿಗಿರೋದು ಒಂದೇ ಒಂದು ಆಸೆ. ಅದು ಸಂತಾನ ಪ್ರಾಪ್ತಿ. ಅದೇಷ್ಟೋ ದೇವರುಗಳಿಗೆ ಹರಿಕೆ ಹೊತ್ತು ಗುಡಿಗುಂಡಾರಗಳನ್ನು ಸುತ್ತಾಡಿ ಬಂದರು ಮಕ್ಕಳಾಗಿರಲಿಲ್ಲಾ.
ಯಾವುದೋ ಒಂದು ಶುಭ ಗಳಿಗೆ ಆಂಜನೇಯನ ಗುಡಿಗೆ ಹೋಗಿ ಹರಿಕೆ ಹೊತ್ತ ಮೇಲೆ ಗರ್ಭನಿಂತಿತು. ಅಂದೇ
ರಾತ್ರಿ ಕನಸಿನಲ್ಲಿ ಒಬ್ಬ ಮನುಷ್ಯ ಬಂದಹಾಗಾಯಿತು. ನಿಮ್ಮ ಪೂರ್ವಜನ್ಮದ ಪಾಪ ಪುಣ್ಯಗಳ ಲೆಕ್ಕಹಾಕಿ ಈ ಮಗುವನ್ನು ಕಲ್ಪಸಿದ್ದೇನೆ. ಇದರ ಆಗೋ ಹೋಗುಗಳು ನನ್ನದಲ್ಲ ಅದು ಕೇವಲ ನಿಮ್ಮ ಕರ್ಮಫಲ ಎಂದು ಹೇಳಿ ಮರೆಯಾದ ಹಾಗಾಯಿತು ಹೆಂಡತಿಗೆ ಪರಮಾಶ್ಚರ್ಯ ಕಣ್ಣು ಬಿಟ್ಟರೆ ಸುತ್ತೆಲ್ಲ ಬರಿ ಕತ್ತಲು. ಸರಿ ಇದು ಕನಸು ಆಗಿದ್ದಾಗಲಿ ಮಗುವಾದರು ದಯಪಾಲಿಸಿದನಲ್ಲಾ ಎಂದು ದಂಪತಿಗಳು ಖುಷಿಯಾದರು. ಆಗ ಅವರಿಗೆ ಆಕಾಶ ಮುರೇ ಗೇಣು.
ಗಂಡು ಮಗು ಜನ್ಮ ಪಡೆಯಿತು. ತುಂಬಾ ಸುಂದರವಾದ ಮಗು ಒಂದು ತಟ್ಟೆಯಲ್ಲಿ ನೀರು ಹಾಕಿ ಬೆಳದಿಂಗಳಿನಲ್ಲಿ ಹುಣ್ಣುಮೆಯ ಚಂದ್ರನನ್ನು ನೋಡಿದ ಹಾಗೆ ಹಾಲ್ಗೆನ್ನೆಯ ಆ ಮಗು ನೋಡಿದರೆ ದೃಷ್ಟಿ ತಾಗಬೇಕು. ಅಂತಹ ಮಗು ಹುಟ್ಟಿದಾಗಿನಿಂದ ತುಂಬಾ ಕಿರಿ ಕಿರಿ ಮಾಡುತ್ತಲಿತ್ತು. ಹೊಟ್ಟೆ ಹಸಿದರೂ, ಹೊಟ್ಟೆ ತುಂಬಿದರು ತಾಯಿ ಅವನ ಹತ್ತಿರವೇ ಬೇಕು. ಅವಳನ್ನು ಬಿಟ್ಟು ಒಂದು ಗಳಿಗೆಯು ನಿಲ್ಲುತ್ತಿರಲಿಲ್ಲಾ, ಯಾರ ಹತ್ತಿರವೂ ಹೋಗುತ್ತಿರಲಿಲ್ಲಾ. ಯಾವುದೇ ಕೆಲಸ ಕಾರ್ಯಗಳು ಇರಲಿಅದನ್ನು ಹೊತ್ತುಕೊಂಡೆ ಮಾಡಬೇಕು. ತುಂಬಾ ವರ್ಷಗಳ ನಂತರ ಹುಟ್ಟಿದ್ದಕ್ಕಾಗಿ ತಾಯಿಗೂ ವಯಸ್ಸಾಗಿತ್ತು. ಅವಳ ಕಷ್ಟ ಯಾರಿಗೂ ಬೇಡ. ಒಂದೊಂದು ಸಾರಿ ಬೆಸತ್ತು ಯಾವ ಜನ್ಮದ ಕರ್ಮಾನೋ ಎಂದು ಬೈಯುತ್ತಿದ್ದಳು ಪ್ರತಿಸಾರಿ ಬೈದಾಗೋ ನೆನಪಾಗುತ್ತಿದ್ದ ಕನಸಿನಲ್ಲಿ ಬಂದಿದ್ದ ಆ ದೈವದೂತ. ಆದರೂ ಮಗು ತಾಯಿಗೆ ಭಾರಾನಾ ಎಂದುಕೊಂಡು ಹೇಗೂ ಅದನ್ನು ಮಡಿಲ್ಲಲ್ಲಿ ಇಟ್ಟುಕೊಂಡ ಕೆಲಸ ಮಾಡುತ್ತಿದ್ದಳು ಆದರೆ ಒಂದು ದಿನ.
ಸಾಯಂಕಾಲದ ಸಮಯ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಕಸ ಗುಡಿಸುತ್ತಿದ್ದಳು ಒಬ್ಬ ಗಡ್ಡದಾರಿ ತಪಸ್ವಿ ಸಾದು
ಹರಿ ಓ00000. . . ಭವತಿ ಬೀಕ್ಷಾಂದೇಹಿ ಎಂದು ಬಿಕ್ಷೆಗೆ ಬಂದ. ಈಕೆ ತಲೆ ಎತ್ತಿ ಅವನನ್ನು ನೋಡಿಯೂ ಇಲ್ಲಾ ಕೇವಲ ಒಂದು ವರ್ಷದ ಮಗುವನ್ನು ಉದ್ದೇಶಿಸಿ ಯಾಕೋ ಮಂಡಳವೇಡೆ ನಿನ್ಯಾಕೋ ಇಲ್ಲಿ ಎಂದು ಉದ್ಘರಿಸಿದ. ತಾಯಿಗೆ ಅಚ್ಚರಿ. ? ಪಕ್ಕದ ಗೋಡೆಯ ಮೇಲೆ ಈಕೆದೇ ನೆರಳು ಬೆನ್ನು ಮೇಲೆ ಕಟ್ಟಿಕೊಂಡ ಮಗುವಿನಿಂದ ಕೈ ಸೊನ್ನೆ ಶ್!!!!!!!!! ಶ್ !!!!! . . . ಅದನ್ನು ಪಕ್ಕಾ ನೋಡಿದ ತಾಯಿ ಎದೆ ಒಡಿಯಿತು. ಇದೇನು ಒಂದು ವರ್ಷದ ಮಗು ಈ ಸಾದು ತಪಸ್ವಿಯ ಮಾತಿಗೆ ಪ್ರತಿಕ್ರೀಯೆಸಿತು. ನೋಡಿ ತಾಯಿ ಗಾಬರಿ ಆದಳು. ಯಾರು ಮಂಗಳವೇಡೆ ಎಂದು ಕೇಳಿದಳು ಯಾರಿಲ್ಲಮ್ಮಾ ಸುಮ್ಮೆ ಮಗುವನ್ನ ಆಡಿಸಿದೆ ಎಂದು ಹೇಳಿ ಬಿಕ್ಷೆ ತೆಗೆದುಕೋಂಡು ಹೋದ. ಆದರೆ ಅದು ತಾಯಿಯ ಮನಸ್ಸಿನಲ್ಲಿ ಉಳಿಯಿತು.
ಮಾರನೇ ದಿನ ಬೆಳಿಗ್ಗೆ ತಾಯಿ ತಪಸ್ವಿ ತಂಗಿದ್ದ ಆಂಜನೇಯ ಗುಡಿಯ ಹತ್ತಿರಕ್ಕೆ ಹೋದಳು. ಅವನ ಕಾಲುಗಳಿಗ
ನಮಸ್ಕರಿಸಿ, ಅಳುತ್ತಾ ಬೇಡಿಕೊಂಡಳು ಯಾರು ನನ್ನ ಮಗು, ಅವನನ್ನು ಉದ್ದೇಶಿಸಿ ನೀವು ಮಾತನಾಡಿದ್ದನ್ನು ನಾನು ಕೇಳಿದೆ. ಆ ಒಂದು ವರ್ಷದ ಮಗು ನಿಮಗೆ ಪ್ರತಿಕ್ರೀಯಿಸಿದ್ದನ್ನು ನೋಡಿ ದಂಗಾಗಿದ್ದೇನೆ. ದಯವಿಟ್ಟು ಹೇಳಿ ಎಂದು ಪರಿ-ಪರಿಯಾಗಿ ಬೇಡಿಕೊಂಡಳು. ಆಗ ಆ ತಪಸ್ವಿ ತನ್ನ ದಿವ್ಯ ದೃಷ್ಟಿಯಿಂದ ಎಲ್ಲ ಸಂಗತಿಯನ್ನು ತಿಳೀದು ನೋಡಮ್ಮಾ ಆತ ಮಂಡಳವೇಡೆ ಅಂಥಾ. ರಾಕ್ಷೇಸಿ ಕುಲದವನು ಸುಮಾರು ವರ್ಷಗಳ ಹಿಂದೆ ದುರಾತ್ಮಗಳನ್ನೇ ಪಳಗಿಸಿ ಅವುಗಳಿಂದ ಕೆಟ್ಟ ಕೆಲಸಗಳನ್ನು ಮಾಡಿಸುತ್ತಿದ್ದ.
ಇದು ನಿಜವೇ ನನಗೆ ನಂಬಲು ಆಗುತ್ತಿಲ್ಲಾ ಎಂದಳು.
ಹಾಗಾದರೆ ಬರುವ ಹುಣ್ಣುಮೆಯ ರಾತ್ರಿಯಂದು ನೀವು ಒಂದು ಬಂಡಿಗಾಡಿಯನ್ನು ಹೂಡಿ ಅದರಲ್ಲಿ ಎಲ್ಲ ತರಹದ
ಬಕ್ಷ ಭೋಜನಗಳನ್ನು ತಯಾರಿಸಿಕೊಂಡಿರಿ, ಹಣ್ಣು ಹಂಪಲುಗಳನ್ನು ತುಂಬಿರಿ ಅಲ್ಲದೇ ಎರಡು ಕುರಿ (ಹೋತು ಮರಿ) ಗಳನ್ನು ತೆಗೆದುಕೊಂಡು ಈ ಊರಿನಿಂದ ಪೂರ್ವದಿಕ್ಕಿನಲ್ಲಿ ಸುಮಾರು ದೂರ ಹೋದಾಗ ಒಂದು ಅರಣ್ಯ ಬರುತ್ತದೆ. ಅಲ್ಲಿ ನಡು ಅರಣ್ಯದಲ್ಲಿ ಅವುಗಳನ್ನೇಲ್ಲ ಇಟ್ಟು ಅಲ್ಲಿಂದ ದೂರದಲ್ಲಿ ನೀವು ಕುಳಿತುಕೊಳ್ಳಿ ಯಾವುದೇ ಕಾರಣಕ್ಕೂ ನೀವು ಅದಕ್ಕೆ ಕಾಣಲೇಬಾರದು ಅದು ನಿಮಗೆ ಕಂಡರೆ ಸಾಕು. ಅದೇಷ್ಟೇ ಅತ್ತರು, ಚೀರಿದರು ಅದರ ಕಡೆಗೆ ನೀವು ಹೋಗಬೇಡಿ ಮುಂದೆ ನೋಡಿ ಅದರ ಆಟವನ್ನು ಎಂದು ಹೇಳಿ ಕಳುಹಿಸಿದ.
ಸರಿ ಹುಣ್ಣಿಮೆಯ ದಿನ ಎಲ್ಲ ತಯಾರಿಮಾಡಿಕೊಂಡು ಇಬ್ಬರು ದಂಪತಿಗಳು ರಾತ್ರಿ ಬಂಡಿಹೂಡಿ ಹೊರಟರು
ಸುತ್ತಲು ನಿರ್ಜನ ವಾತಾವರಣ ಎಲ್ಲಿಯವರೆಗೆ ನೋಡಿದರು ಬರಿ ಕಾಡು ಅಲ್ಲಿಯೇ ಒಂದು ಗಿಡದ ಕೆಳಗೆ ಎಲ್ಲವನ್ನು ಇಟ್ಟು ಅಲ್ಲಿಂದ ದೂರ ದೂರ ಬಂದು ಬೇರೊಂದು ಗಿಡದ ಮೇಲೆ ಏರಿ ಇಬ್ಬರು ದಂಪತಿಗಳು ಕುಳಿತರು. ಅರಣ್ಯದಲ್ಲಿ ಹಿಮಹಾಸಿದ ಹಾಗೆ ಎಲ್ಲಡೆ ಬೆಳದಿಂಗಳು. ದೂರದಿಂದ ನೋಡುತ್ತಿದ್ದಾರೆ. ಮಗು ಅಳಲು ಪ್ರಾರಂಭಿಸಿತು. ಜೋರಾಗಿ ಜೋರಾಗಿ ಚೀರಿ ಚೀರಿ ಅಳಲು ಪ್ರಾರಂಭಿಸಿತು. ಇಲ್ಲಿ ತಾಯಿಗೆ ಅದರ ಧ್ವನಿ ಕೇಳಿ ತಡೆಯಲು ಆಗುತ್ತಿಲ್ಲಾ. ಅದರ ಧ್ವನಿಗೆ ಎದೆಯೊಡೆದು ಹಾಲು ಹೊರ ಸೂಸುತ್ತೀವೆ. ಇನ್ನೇನು ಎದ್ದು ಅವನೆಡೆಗೆ ಹೋಗಬೇಕು ಅನ್ನುವಷ್ಟರಲ್ಲಿ ಸಾಧು ತಪಸ್ವಿಯ ಮಾತು ನೆನಪಿಗೆ ಬಂತು ಮತ್ತೆ ತಡೆದಳು. ಅಷ್ಟರಲ್ಲಿ ಮಗು ಎದ್ದು ಕುಳಿತುಕೊಂಡಿತ್ತು ಅತ್ತ ಇತ್ತ ನೋಡುತ್ತ ಎದ್ದ ನಿಂತಿತು. ಇಷ್ಟೋತ್ತು ಅಳುತ್ತಿದ್ದ ಮಗು ಒಂಮ್ಮಿಂದೊಮ್ಮಿಗೆ ನಗಲು ಪ್ರಾರಂಭಿಸಿತು. ನಗು ಮುಂದೆ ಜೋರಾಗಿ ಹಾ ಹಾ ಹಾ ಹಾ . . . ಎಂದು ಗಹಗಹಿಸಿ ನಗಲಾರಂಭಿಸಿತು. ಅದರ ಕೈಗಳು ಎರಡರಿಂದ ನಾಲ್ಕು ನಾಲ್ಕರಿಂದ ಆರಾದವು ಅದೇಷ್ಟೋ ವರ್ಷಗಳಿಂದ ಉಪವಾಸವಿರುವಹಾಗೆ
ನೋಡು ನೋಡುತ್ತಿದ್ದಂತೆ ಒಂದೊಂದಾಗಿ ಬಾಯಿಹಾಕಿತು. ಹಣ್ಣು ಹಂಪಲು ಹಾಗೂ ಎಲ್ಲ ತರಹದ ಬಕ್ಷ
ಬೋಜನವನ್ನು ತಿಂದು ತೇಗಿತು, ಇನ್ನೂ ಹೊಟ್ಟೆ ತುಂಬಿಲ್ಲಾ ಅನ್ನುವ ತರ ಆ ಕಡೆ ಇ ಕಡೆ ನೋಡುತೊಡಗಿತು ಅಲ್ಲಿ ಕಂಡಿದ್ದು, ಆ ಎರೆಡು ಕುರಿಗಳು ಅವುಗಳನ್ನು ತನ್ನ ಆರು ಕೈಗಳಿಂದ ಹರಿದು ಹಸಿ ರಕ್ತದೊಂದಿಗೆ ಗಂಟಲಿಗೆ ಹಾಕಿಕೊಂಡಿತು. ಹೀಗೆ ಎಲ್ಲ ತಿಂದಬಳಿಕ ಕೆ. ಕೆ. ಹಾಕುತ್ತಾ ಅಲ್ಲಿಂದ ಉತ್ತರ ದಿಕ್ಕಿನೆಡೆಗೆ ಓಡಿ ಹೋಯಿತು. ನಂತರ ದಂಪತಿಗಳು ಸ್ವಾಮಿಯನ್ನು ಕಂಡರು. ಮುಂದೆ ಅವನು ಹೇಳಿದ ಹಾಗೆ ಸುಖ ಜೀವನ ನಡೆಸಿದರು ಎಂದು ಹೇಳುವಷ್ಟರಲ್ಲಿ ನಮಗೆ ನಿದ್ದೆ ಬಂದಿರುತ್ತಿತ್ತು. ಇಂತಹ ಅದೇಷ್ಟೋ ಕಥೆಗಳನ್ನು ತನ್ನ ನೆನಪಿನ ಬುತ್ತಿಯ ಗಂಟು ಬಿಚ್ಚುತ್ತಾ ನಮ್ಮ ಅಜ್ಜಿ ಆಗಾಗ ತಿನಬಡಿಸುತ್ತಿದ್ದಳು.
ನಿಮ್ಮವ .
ಎ. ಜಿ. ವಿಜಿ,
ವಿಜಾಪೂರ.